Wednesday, June 15, 2011

ತುಂಬು ನದಿಯ ದಡ

ತುಂಬಿದ ನದಿಯ
ದಡದಲಿ ನಾನು
ನಂಬಿ ಕಾಯುತಿರುವೆ
ದೂರದಿ ತೇಲುವ
ದೋಣಿಯ ಮೇಲೆ
ನೀನೇ ಕಾಣುತಿರುವೆ.


ಹುಣ್ಣಿಮೆ ಇರುಳು
ಚಂದ್ರನ ನೆರಳು
ನನ್ನ ಸೋಕಿತಾಗ
ಹೇಗೆ ತೆರೆಯಿತೋ
ಅರಿಯೆನು ನಾನು
ನನ್ನ ಎದೆಯ ಬೀಗ


ತಲ್ಲಣ ಹೂದಳ
ತಳಮಳ ಪರಿಮಳ
ಬಾರದ ದುಂಬಿ ನೀನು
ಗಾಳಿಯ ಬೆರಳು
ತಂತಿಯ ತಾಗಿ
ಮಿಡಿದ ವೀಣೆ ನಾನು


ತುಂಬಿತು ಕಣ್ಣು
ತುಳುಕಿತು ನೀರು
ಮುತ್ತನಾಯುತಿವೆ ಮೀನು


ಪ್ರೇಮದ ಪತ್ರವ
ದೋಣಿಯ ಮಾಡಿ
ತೇಲಿ ಬಿಡುವೆ ನಾನು

-ಡಾ.ಕೆ.ವೈ.ನಾರಾಯಣಸ್ವಾಮಿ

1 comment:

  1. ತುಳುಕಿದ ಕಣ್ಣೀರ ಮುತ್ತುಗಳನ್ನಾಯುವ ಮೀನುಗಳಿರುವ ತುಂಬು ನದಿಯ ದಡದಲ್ಲಿ
    ನಾನೂ ಪ್ರೇಮಿ ಸಾರ್...

    -ಮಂಜು

    ReplyDelete