Wednesday, May 15, 2013
Tuesday, May 7, 2013
ಕೆ.ವೈ.ಎನ್.ಹೊಸ ನಾಟಕ 'ಚಕ್ರರತ್ನ'
ಕೆ.ವೈ.ನಾರಾಯಣಸ್ವಾಮಿರವರ ಹೊಸ ನಾಟಕ 'ಚಕ್ರರತ್ನ'.
ಚಕ್ರರತ್ನ ನಾಟಕವು ಸಧ್ಯದ ವರ್ತಮಾನದಲ್ಲಿ ಮಾನವತೆಯ ಎದೆಮೇಲಿನ ಮಾಯದ ಗಾಯವಾಗಿ ಉಳಿದಿರುವ ಯುದ್ಧದ ಪ್ರಕ್ರಿಯೆಯನ್ನು ಹಾಗೂ ಈ ನೋವಿನಿಂದ ಪಾರಾಗಲು ಬಯಸುವ ಮನುಷ್ಯ ಪ್ರಯತ್ನವನ್ನು ಮರುವ್ಯಾಖ್ಯಾನಿಸುವುದೇ ಆಗಿದೆ. ಅಧಿಕಾರ ಮತ್ತು ಆಕಾಂಕ್ಷೆಗಳು ಮನುಷ್ಯ ಸಮಾಜದಲ್ಲಿ ಉತ್ಪಾದಿಸುವ ಕ್ಷೌರ್ಯದ ನೆಲೆಗಳನ್ನು ನಾಟಕೀಯ ಚೌಕಟ್ಟಿನಲ್ಲಿ ಇರಿಸುವ ಪ್ರಯತ್ನವಾಗಿದೆ. ಕನ್ನಡದ ಆದಿಕವಿ ಪಂಪ ತನ್ನ ಮಹಾಕೃತಿ ಆದಿಪುರಾಣದಲ್ಲಿ ಇಂತಹ ಹಿಂಸೆ ಮತ್ತು ಅಹಿಂಸೆಗಳ ಸಂಕೀರ್ಣ ಸಂಬಂಧಗಳನ್ನು ಚಿತ್ರಿಸಿದ್ದಾರೆ. ಭರತ-ಬಾಹುಬಲಿ ರಾಜರಾಗುವ ಮುನ್ನ ಅಣ್ಣತಮ್ಮರಾಗಿದ್ದವರು. ಅಧಿಕಾರ ಸಿಕ್ಕ ತಕ್ಷಣದಲ್ಲಿ ಹಗೆಗಳಾಗಿ ಮಾರ್ಪಾಟಾಗುವ ಕತೆಯ ಮೂಲಕ ಪಂಪ ಲೋಕಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ. ಹಿಂಸೆ ಮತ್ತು ಅಹಿಂಸೆಗಳು ಪರಸ್ಪರ ವಿರುದ್ಧ ಸತ್ವಗಳಾಗಿರದೆ ಒಂದರಲ್ಲಿ ಇನ್ನೊಂದು ಅಸ್ಥಿತ್ವವನ್ನು ಪಡೆದುಕೊಂಡಿರುವ ಪ್ರಕ್ರಿಯೆಯಾಗಿರುವುದೇ ಮಾನವ ಚರಿತ್ರೆಯ ಬಹುದೊಡ್ಡ ವಿಸ್ಮಯವೂ ದುರಂತವೂ ಆಗಿದೆ. ಈ ಅನುಭವವನ್ನು ಕಾಣಿಸುವುದಕ್ಕೆ ಚಕ್ರರತ್ನ ನಾಟಕ ಪ್ರಯತ್ನಿಸುತ್ತದೆ.
ರೂಪಾಂತರ
ಕೆ.ವೈ.ನಾರಾಯಣಸ್ವಾಮಿ
ಕೆ.ಎಸ್.ಡಿ.ಎಲ್.ಚಂದ್ರು
22.05.2013, ಸಂಜೆ 7ಕ್ಕೆ
ರವೀಂದ್ರ ಕಲಾಕ್ಷೇತ್ರ

Tuesday, April 17, 2012
Subscribe to:
Posts (Atom)